ರೈತ ಮಿತ್ರರೇ Bara parihara hana jame ನಿಮಗೇಕೆ ಇನ್ನೂ ಬರಗಾಲ ಪರಿಹಾರ ಜಮೆಯಾಗಿಲ್ಲ? ಕಾರಣವೇನು ತಿಳಿಯಿರಿ…!
ಕೇಂದ್ರ ಸರ್ಕಾರದ ವತಿಯಿಂದ ಬಿಡುಗಡೆಗೊಂಡ ಬರಗಾಲ ಪರಿಹಾರ ಹಣ ಕೆಲವು ರೈತರಿಗೆ ಜಮೆಯಾಗಿದೆ. ಹಾಗೆಯೆ ಇನ್ನೂ ಕೆಲವು ರೈತರಿಗೆ ಜಮೆಯಾಗಿಲ್ಲ. ಆ ರೈತರಿಗೆ ಎಲ್ಲಾ ಅರ್ಹತೆಗಳಿದ್ದರೂ ಇನ್ನು ಪರಿಹಾರ ಹಣ ಜಮೆಯಾಗಿಲ್ಲ.
Bara parihara hana
ಈ ಯೋಜನೆಯಿಂದ ರೈತರಿಗೆ ಸಿಗಲಿದೆ ಎಕರೆಗೆ 5000₹ ಹಣ, ಇಲ್ಲಿದೆ ಸಂಪೂರ್ಣ ಮಾಹಿತಿ. Kisan ashirwad yojana
ಕೆಲವು ರೈತರ ಹೆಸರಿಗೆ ಎಫ್ಐಡಿ ಇದ್ದರೂ ಹಾಗೂ ಬೆಳೆ ಸಮೀಕ್ಷೆಮಾಡಿಸಿದರೂ ಬರಗಾಲ ಪರಿಹಾರ ಹಣ ಇನ್ನೂ ಜಮೆಯಾಗಿಲ್ಲ. ಹಾಗಾದರೆ ಯಾವ ಯಾವ ಕಾರಣಕ್ಕಾಗಿ ನಿಮಗೆ ಬರಗಾಲ ಪರಿಹಾರ ಹಣ ಜಮೆಯಾಗಿಲ್ಲ. ಇದಕ್ಕಾಗಿ ರೈತರೇನು ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಕೋಳಿ ಸಾಕಾಣಿಕೆ ಮಾಡುವ ವಿಧಾನ. ಮತ್ತು ಅಳತೆ, ವೆಚ್ಚ , ಇಲ್ಲಿದೆ ಮಾಹಿತಿ. Poultry farming in kannada
ರೈತರು ಮೊದಲು ತಮ್ಮ ಜಮೀನಿನ ಪಹಣಿಗೆ ತಮ್ಮ ಎಫ್ಐಡಿ ಇದೆಯೋ ಇಲ್ಲವೋ ಎಂಬುದು ಖಚಿತಪಡಿಸಿಕೊಳ್ಳಿ. ನಂತರ ತಮ್ಮ ಬ್ಯಾಂಕ್ ಖಾತೆಗೆ ಎನ್.ಪಿ.ಸಿ.ಐ ಲಿಂಕ್ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಿ.
ಒಂದುವೇಳೆ ಎನ್.ಪಿ.ಸಿ.ಐ (NPCI) ಲಿಂಕ್ ಇದ್ದಲ್ಲಿ ಎಫ್ಐಡಿಯಲ್ಲಿ ಇರುವ ಬ್ಯಾಂಕ್ ಖಾತೆ ಸಂಖ್ಯೆಗೂ ಎನ್.ಪಿ.ಸಿಐ ಲಿಂಕ್ ಇರುವ ಸಂಖ್ಯೆ ಒಂದೇ ಆಗಿರಬೇಕು. ಎನ್.ಪಿ.ಸಿ.ಐ ಲಿಂಕ್ ಹಾಗೂ ಎಫ್ಐಡಿ ಇರುವ ಬ್ಯಾಂಕ್ ಖಾತೆ ಸಂಖ್ಯೆ ಬೇರೆ ಬೇರೆ ಆಗಿದ್ದಲ್ಲಿ ರೈತರು ಎಫ್ಐಡಿ ಇರುವ ಬ್ಯಾಂಕ್ ಖಾತೆ ಸಂಖ್ಯೆಯನ್ನು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಬದಲಾವಣೆ ಮಾಡಿಸಿಕೊಳ್ಳಬೇಕಾಗುತ್ತದೆ.
ಸೋಲಾರ್ ಪಂಪ್ಸೆಟ್ ಯೋಜನೆ ಕೇವಲ 20,000 ಕಟ್ಟಿದ್ರೆ ಸಾಕು. ಈಗಲೇ ಅರ್ಜಿ ಸಲ್ಲಿಸಿ. solar pumpset scheme
ನಿಮ್ಮ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯಲ್ಲಿರುವ ಹೆಸರು ಒಂದೇ ಆಗಿರಬೇಕು. ಹಾಗೆಯೆ ಅಕೌಂಟ್ ಇನ್ ವ್ಯಾಲಿಡ್, ಕ್ಲೋಸ್, ಬ್ಲಾಕ್ ಆಧಾರ್ ನಾಟ್ ಸೀಡಿಂಗ್ ಹಾಗೂ ಇತರ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದೆಯೇ ಎಂದು ಪರಿಶೀಲಿಸಿ ಚಾಲ್ತಿ ಮಾಡಿಸಿಕೊಳ್ಳಿ.
ನಿಮ್ಮ ಬರಗಾಲ ಪರಿಹಾರ ಹಣ ತಡೆಹಿಡಿಯಲಾಗಿದೆಯೋ ಎಂಬುದನ್ನು ಚೆಕ್ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಒತ್ತಿರಿ.
https://parihara.karnataka.gov.in/service92/ ಒತ್ತಿದಾಗ ಅಲ್ಲಿ ಭೂಮಿ ಆನ್ಲೈನ್ ಪರಿಹಾರ ಪೇಜ್ ತೆರೆಯುತ್ತದೆ.
ನಂತರ Select Year / ವರ್ಷ 2023-24 ಆಯ್ಕೆ ಮಾಡಿ, Select Season / ಋತು ಆಯ್ಕೆ ಯಡಿಯಲ್ಲಿ ಮುಂಗಾರು ಆಯ್ಕೆ ಮಾಡಿಕೊಳ್ಳಿ. ಇದಾದ ನಂತರ Select Calamity ವಿಪತ್ತು ಆಯ್ಕೆ ಯಡಿಯಲ್ಲಿ ಬರ ಆಯ್ಕೆ ಮಾಡಿಕೊಳ್ಳಿ. ಕೊನೆಗೆ Get Data / ಹುಡುಕು ಮೇಲೆ ಕ್ಲಿಕ್ ಮಾಡಿ.
ಅಲ್ಲಿ ನಿಮಗೆ ಆಧಾರ್ ಸಂಖ್ಯೆ, ರೈತರ ಗುರುತಿನ ಸಂಖ್ಯೆ, ಮೊಬೈಲ್ ಸಂಖ್ಯೆಹಾಗೂ ಸರ್ವೆ ನಂಬರ್ ಈ ನಾಲ್ಕರಲ್ಲಿ ಯಾವುದಾದರೊಂದು ಒಂದನ್ನು ಆಯ್ಕೆಮಾಡಿ.
- ಸರ್ವೆ ನಂಬರ್ ಆಯ್ಕೆ ಮಾಡಿ ಬರ ಪರಿಹಾರ ಹೀಗೆ ಚೆಕ್ ಮಾಡಿ
- ಮೊದಲಿಗೆ ನೀವು ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಬೇಕು.
- ಅಲ್ಲಿ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು.ಹಾಗೆಯೆ ನಿಮ್ಮ ತಾಲೂಕು ಮತ್ತು ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು.
- ಮುಂದೆ ನಿಮ್ಮ ಊರು ಗ್ರಾಮ ಆಯ್ಕೆಮಾಡಿಕೊಳ್ಳಬೇಕು.
- ಅಲ್ಲಿ ನಿಮ್ಮ ಸರ್ವೆ ನಂಬರ್ ನಮೂದಿಸಬೇಕು.
- ನಂತರ ಸರ್ನೋಕ್ ನಲ್ಲಿ ಹಾಗೂ ಹಿಸ್ಸಾ ನಂಬರ್ ನಲ್ಲಿಯೂ ಸಹ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು.
- ಕೊನೆಗೆ ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ನಮೂದಿಸಿದ ಸರ್ವೆ ನಂಬರ್ ನಲ್ಲಿ ಬರುವ ಜಮೀನಿನ ಮಾಲಿಕರ ಹೆಸರು ನಿಮಗೆ ಲಭಿಸುತ್ತದೆ.
- ಅಲ್ಲಿ ನೀವು ಅದರ ಹಿಂದಿರುವ ಬಾಕ್ಸ್ ಆಯ್ಕೆ ಮಾಡಿಕೊಂಡರೆ ಯಾವ ಬ್ಯಾಂಕಿನಲ್ಲಿ ಯಾವಾಗ ಬರ ಪರಿಹಾರ ಹಣ ಜಮೆಯಾಗಿದೆ ಎಂಬ ಮಾಹಿತಿ ಸಿಗಲಿದೆ.
https://adrustavani.com/gruhalakshmi-11th-installment-updates/