ರಾಜ್ಯದ ರೈತರು ತಮ್ಮ ಜಮೀನಿನ ಮೇಲೆ ಮಾಡಿದಂತಹ ಬೆಳೆ ಸಾಲದ ಮನ್ನ ಕುರಿತಂತಹ ಮಾಹಿತಿಯನ್ನು ಪಡೆಯಲು ಸರ್ಕಾರವು ಲಿಂಕನ್ನು Crop loan waiver farmer list ಬಿಡುಗಡೆ ಮಾಡಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.
ರೈತರು ತಮ್ಮ ಬೆಳೆಗಳ ಮೇಲೆ ಮಾಡಿದಂತಹ ಸಾಲ ಮತ್ತು ಸಾಲ ಮನ್ನಾ ಕುರಿತಂತಹ ವಿವರಗಳನ್ನು ಅಲ್ಲದೆ ತಮ್ಮ ಹಳ್ಳಿಯ ರೈತರ ಪಟ್ಟಿಯನ್ನು ಕಲೆ ಹಾಕಲು ರಾಜ್ಯ ಸರ್ಕಾರವು ಅಧಿಕೃತ ಜಾಲತಾಣದ ಲಿಂಕನ್ನು ಬಿಡುಗಡೆ ಮಾಡಲಾಗಿದ್ದು, ರೈತರು ಹೇಗೆ ತಮ್ಮ ಮೊಬೈಲ್ ಮೂಲಕ ತಿಳಿಯಬಹುದು ಎಂಬುವ ಮಾಹಿತಿಯನ್ನು ಈಗ ನೋಡೋಣ.
Crop loan waiver farmer list
Bara parihara hana : ಯಾರಿಗೆ ಬರ ಪರಿಹಾರ ಹಣ ಬಂದಿಲ್ಲ, ಈ ಕೆಲಸ ಮಾಡಿ ಹಣ ಬರುತ್ತೆ.
2017 ಮತ್ತು 2018ನೇ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದಂತಹ ಕುಮಾರಸ್ವಾಮಿ ಯು ಆಗಿನ ಬಜೆಟ್ ನಲ್ಲಿ ರಾಜ್ಯದ ರೈತರ ಬೆಳೆ ಸಾಲವನ್ನು 50,000 ವರೆಗೆ ಮತ್ತು ಒಂದು ಲಕ್ಷದವರೆಗಿನ ಬ್ಯಾಂಕಿನ ಸಾಲವನ್ನು ಮನ್ನಾ ಮಾಡಿ, ಬಜೆಟ್ಟಿನಲ್ಲಿ ಒಟ್ಟು 7,662 ಕೋಟಿಗಳನ್ನು ರಾಜ್ಯದ ರೈತರ ಹಿತಕ್ಕಾಗಿ ವೆಚ್ಚ ಮಾಡಲಾಗಿತ್ತು.
ಆ ಸಮಯದಲ್ಲಿ ರಾಜ್ಯದ ಯಾವೆಲ್ಲಾ ರೈತರು ಸಾಲಮನ್ನಾ ಯೋಜನೆಯ ಪ್ರಯೋಜನವನ್ನು ಪಡೆದಿದ್ದಾರೆ ಮತ್ತು ಯಾವೆಲ್ಲ ರೈತರು ಸಾಲಮನ್ನಾ ಯೋಜನೆಯ ಲಾಭ ಪಡೆದುಕೊಂಡಿಲ್ಲ ಅಂತವರ ಪಟ್ಟಿಯನ್ನು ನೀವು ಸುಲಭವಾಗಿ ಈ ಹಂತಗಳ ಮೂಲಕ ತಿಳಿದುಕೊಳ್ಳಿ.
ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಇನ್ನೂ ಬಂದಿಲ್ಲವೇ? ಈ ಕೆಲಸ ಮಾಡಿ Gruhalakshmi 11th Installment Updates
Step-1 ನೀವು ಈ ಕೆಳಗೆ ಕೊಟ್ಟಿರುವ ಸರಕಾರದ ಅಧಿಕೃತ ಜಾಲತಾಣದ ಕೊಂಡಿ ಮೇಲೆ ಕ್ಲಿಕ್ ಮಾಡುವ ಮೂಲಕ ಭೇಟಿ ಮಾಡಬೇಕು.
https://mahitikanaja.karnataka.gov.in/Service/Service/2066
Step-2 ನಂತರ ಅಲ್ಲಿ ನಿಮಗೆ ರೆವಿನ್ಯೂ ಡಿಪಾರ್ಟ್ಮೆಂಟ್ ಅಥವಾ ಕಂದಾಯ ಇಲಾಖೆ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
Step-3 ಇದಾದ ನಂತರದಲ್ಲಿ ಕಂದಾಯ ಇಲಾಖೆ ಸರ್ವಿಸಸ್ ಮೇಲೆ ಕ್ಲಿಕ್ ಮಾಡಿದ ನಂತರ ವಾಣಿಜ್ಯ ಬ್ಯಾಂಕ್ ಸಾಲ ಮನ್ನಾ ವರದಿಯನ್ನು ತೋರಿಸುತ್ತದೆ ಅದರ ಮೇಲೆ ಒತ್ತಬೇಕು.
Step-4 ನೀವು ಮುಂದಿನ ಕಾಲಮ್ನಲ್ಲಿ ರೈತ ಎಂದು ಆಯ್ಕೆ ಮಾಡಿ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಗ್ರಾಮ ಎಲ್ಲವನ್ನು ತುಂಬಿ ಸಬ್ಮಿಟ್ ಮೇಲೆ ಒತ್ತಿದರೆ ನೀವು ವಾಣಿಜ್ಯ ಬ್ಯಾಂಕ್ ನಲ್ಲಿ ಸಾಲ ಮಾಡಿದ್ದಲ್ಲಿ ಅದರ ಸಂಪೂರ್ಣವಾಗಿ ತೋರಿಸುತ್ತದೆ.
ಹೊಸ ರೇಷನ್ ಕಾರ್ಡ್ ಅರ್ಜಿ ಅಹ್ವಾನ – ಸಚಿವ ಮುನಿಯಪ್ಪ new ration card
ಒಂದು ವೇಳೆ ನೀವು ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳ ಅಧೀನದಲ್ಲಿ ಬೆಳೆಸಾಲ ಪಡೆದುಕೊಂಡಿದ್ದಲ್ಲಿ ಅಂತವರು ಹೇಗೆ ವರದಿಯನ್ನು ವೀಕ್ಷಣೆ ಮಾಡುವುದೆಂಬುದರ ಮಾಹಿತಿ ಇಲ್ಲಿದೆ.
Step-1 ಮೊದಲಿಗೆ ನೀವು ಈ ಜಾಲತಾಣದ ಕೊಂಡಿ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕಾಣುವ ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳ ಸಾಲ ಮನ್ನಾ ವರದಿ ಆಯ್ಕೆ ಮೇಲೆ ಒತ್ತಬೇಕು.
Step-2 ನಂತರದ ಪುಟದಲ್ಲಿ ಕಾಣುವ ಮಾದರಿಯ ಎನ್ನುವ ಆಯ್ಕೆಯಲ್ಲಿ ನೀವು ಫಾರ್ಮರ್ ಎಂದು ಆಯ್ಕೆ ಮಾಡಿ, ನಿಮ್ಮ ಜಿಲ್ಲೆಯ ತಾಲೂಕು ಹೋಬಳಿ ಗ್ರಾಮ ಎಲ್ಲವನ್ನು ಭರ್ತಿ ಮಾಡಿ ಸಲ್ಲಿಸಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-3 ಇದಾದ ನಂತರ ನಿಮಗೆ ಮತ್ತೊಂದು ಪುಟ ತೆರೆದು ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳಲ್ಲಿ ಮಾಡಿದ ಬೆಳೆ ಸಾಲದ ಮನ್ನ ವರದಿಯನ್ನು ನೋಡಬಹುದಾಗಿದೆ.