ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಲ್ಲಿ ಉದ್ಯೋಗವಕಾಶ : ಅರ್ಹರು ಜೂನ್ 12ರ ಒಳಗಾಗಿ ಅರ್ಜಿ ಸಲ್ಲಿಸಿ HAL Recruitment
ಅದೃಷ್ಟ ವಾಣಿ ಜಾಲತಾಣಕ್ಕೆ ಪ್ರತಿಯೊಬ್ಬರಿಗೂ ನಮಸ್ಕಾರಗಳು. ಇಂದಿನ ಈ ಅಂಕಣದಲ್ಲಿ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಲ್ಲಿ – HAL ನೇಮಕಾತಿ ಮಾಡಿಕೊಳ್ಳುತ್ತಿರುವಂತಹ ಟೆಕ್ನಿಷಿಯನ್ ಹುದ್ದೆಗಳ ಉದ್ಯೋಗದ ಮಾಹಿತಿಯನ್ನು ತಿಳಿಸಲಿದ್ದೇವೆ.
ಇದನ್ನೂ ಓದಿ; ಬರ ಪರಿಹಾರದ ಹಣ ಜಮಾ ಆಗಿಲ್ಲ ಅಂದ್ರೆ, ಬೇಗ ಗ್ರಾಮ ಪಂಚಾಯಿತಿಯಲ್ಲಿ ಅಪ್ಡೇಟ್ ಮಾಡಿಸಿ,bara parihara list
HAL ನ ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಯಾವ ಅಭ್ಯರ್ಥಿಗಳು ಅರ್ಹರು? ಅರ್ಜಿ ಸಲ್ಲಿಕೆ ಹೇಗೆ? ಎಂಬ ಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ವಿವಿಧ ವಿಭಾಗದಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಸೇರಿ ಒಟ್ಟು 182 ಹುದ್ದೆಗಳ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಜೂನ್ 12 ಕೊನೆಯ ದಿನಾಂಕವಾಗಿದ್ದು, ನೇಮಕಾತಿಯ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಸಲಾಗಿದೆ. ಅರ್ಜಿ ಸಲ್ಲಿಸುವಂತಹ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಮುನ್ನ ನಾವು ನೀಡಿರುವಂತಹ ಅಧಿಕೃತ ಅಧಿಸೂಚನೆಯನ್ನು ಗಮನದಿಂದ ಪರಿಶೀಲಿಸಿ ನಂತರ ಅರ್ಜಿ ಸಲ್ಲಿಸಿ.
Bara parihara hana : ಯಾರಿಗೆ ಬರ ಪರಿಹಾರ ಹಣ ಬಂದಿಲ್ಲ, ಈ ಕೆಲಸ ಮಾಡಿ ಹಣ ಬರುತ್ತೆ.
ಯಾವೆಲ್ಲ ಹುದ್ದೆಗಳಿಗೆ ಈ ನೇಮಕಾತಿ ನಡೆಯುತ್ತಿದೆ ಮತ್ತು ಅರ್ಹತೆಗಳೇನು ? Vacancy and Eligibility Details
ಹಿಂದುಸ್ತಾನ್ ಏರೋನಾಟಿಕ್ ಲಿಮಿಟೆಡ್ – Hindustan Aeronautics Limited ನ ಮೆಕಾನಿಕಲ್ ಎಲೆಕ್ಟ್ರಿಕ್ ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಶನ್ ವಿಭಾಗದ ಡಿಪ್ಲೋಮಾ ಟೆಕ್ನಿಷಿಯನ್ ಹುದ್ದೆಗಳಿಗೆ ಈ ಒಂದು ನೇಮಕಾತಿ ನಡೆಯುತ್ತಿದೆ. ಅದೇ ರೀತಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅದೇ ವಿಷಯಗಳಲ್ಲಿ ಡಿಪ್ಲೋಮಾ ಮುಗಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.
ಈ ಹುದ್ದೆಗಳನ್ನು ಹೊರತುಪಡಿಸಿ ಫಿಟ್ಟರ್, ಎಲೆಕ್ಟ್ರಿಷಿಯನ್, ಮಷೀನಿಸ್ಟ ವೆಲ್ಡರ್ ಮತ್ತು ಶೀಟ್ ಮೆಟಲ್ ವರ್ಕರ್ ವಿಭಾಗದಲ್ಲಿ ಖಾಲಿ ಇರುವ ಆಪರೇಟರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅದೇ ವಿಷಯಗಳಲ್ಲಿ ಐಟಿಐ ಮುಗಿಸಿದವರು ಅರ್ಜಿ ಸಲ್ಲಿಸಲು ಅವಕಾಶವಿದೆ. ಟೆಕ್ನಿಷಿಯನ್ ಮತ್ತು ಆಪರೇಟರ್ ಎರಡು ಹುದ್ದೆಗಳನ್ನು ಸೇರಿ ಒಟ್ಟು 182 ಹುದ್ದೆಗಳಿಗೆ ಈ ನೇಮಕಾತಿ ನಡೆಯುತ್ತಿದೆ.
ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ವಯಸ್ಸಿನ ಮಿತಿ –
HAL Recruitment 2024 – ಅಧಿಕೃತ ಅಧಿಸೂಚನೆಯಲ್ಲಿ Official Notification ತಿಳಿಸಿರುವಂತೆ ಈ ನೇಮಕಾತಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು 28 ವರ್ಷದ ಒಳಗಿರಬೇಕು ಹಾಗೂ ಮೀಸಲಾತಿಯಲ್ಲಿ ಬರುವ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸಿಗುವ ವೇತನ ಶ್ರೇಣಿ – 44,554 ರೂಪಾಯಿಯಿಂದ 46,511 ರೂಪಾಯಿವರೆಗೆ
ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಿ, ಪರೀಕ್ಷೆಯಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಎರಡು ತಿಂಗಳ ತರಬೇತಿಯನ್ನು ನೀಡಿ ಬೆಂಗಳೂರಿನಲ್ಲಿ ನೇಮಕ ಮಾಡಿಕೊಳ್ಳಲಾಗುವುದು. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಆನ್ಲೈನ್ ಮುಖಾಂತರವೇ ಅವಕಾಶ ನೀಡಲಾಗಿದ್ದು ಅಭ್ಯರ್ಥಿಗಳು ನಾವು ನೀಡಿರುವಂತಹ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಜೂನ್ 12ನೇ ತಾರೀಕು ಕೊನೆಯ ದಿನಾಂಕವಾಗಿರುತ್ತದೆ, ಆದ್ದರಿಂದ ಅರ್ಹರಿರುವ ಅಭ್ಯರ್ಥಿಗಳು ಕೊನೆ ದಿನಾಂಕಕ್ಕಿಂತ ಮುಂಚಿತವಾಗಿಯೇ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಕೆಯ ಲಿಂಕ್ – https://www.hal-india.co.in/
ಅಧಿಸೂಚನೆ – Download
Bara parihara hana : ಯಾರಿಗೆ ಬರ ಪರಿಹಾರ ಹಣ ಬಂದಿಲ್ಲ, ಈ ಕೆಲಸ ಮಾಡಿ ಹಣ ಬರುತ್ತೆ.
ಪದವಿ ಮತ್ತು ಡಿಪ್ಲೊಮೊ ವಿದ್ಯಾರ್ಥಿಗಳಿಗೆ 50,000₹ ಸ್ಕಾಲರ್ಷಿಪ್, 50,000 rupees Scholorship for diploma students
ಹೊಸ ರೇಷನ್ ಕಾರ್ಡ್ ಅರ್ಜಿ ಅಹ್ವಾನ - ಸಚಿವ ಮುನಿಯಪ್ಪ new ration card
ಬೆಳೆ ಸಾಲ ಮನ್ನಾ ಆಗಿರುವ ರೈತರ ಪಟ್ಟಿ ಬಿಡುಗಡೆ. Crop loan waiver farmer list
ಕರ್ನಾಟಕ ಜನತೆಗೆ ಸಿಹಿ ಸುದ್ದಿ, ಹುಬ್ಬಲ್ಲಿ - ಪುಣೆ ಮದ್ಯೆ ವಂದೇ ಭಾರತ್ ರೈಲು ಆರಂಭ. Vande Bharat train
ಸರ್ವೇ ನಂಬರ್ ಹಾಕಿ ನಿಮ್ಮ ಜಮೀನಿನ ಸಾಲ ಎಷ್ಟಿದೆ? ಎಂದು ಮೊಬೈಲ್ ನಲ್ಲಿ ಚೆಕ್ ಮಾಡಿ. Check crop loan…