ಆತ್ಮೀಯ ವೀಕ್ಷಕರೆ ಮತ್ತು ರೈತ ಬಾಂಧವರೇ ನಿಮಗೆಲ್ಲ ನಮ್ಮ ಜಾಲತಾಣಕ್ಕೆ ಸ್ವಾಗತ. ಈ ಲೇಖನದಲ್ಲಿ ನಾವು ಸ್ಥಿರಾಸ್ತಿಯಾದ ಆಸ್ತಿ ಖರೀದಿ Property buying advice ಮಾಡುವ ಮುನ್ನ ಏನೆಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬ ಮಾಹಿತಿ ತಿಳಿಯೋಣ.
ಹೌದು ರೈತ ಬಾಂಧವರೇ ನಾವು ಎಷ್ಟೇ ಓದುಬರಹ ಕಲಿಸಿದ್ದರೂ ಸಹ ಮೋಸಗಾರರು ನಮ್ಮನ್ನು ಯಾವುದಾದರೂ ಒಂದು ರೀತಿಯಲ್ಲಿ ಯಾಮಾರಿಸಿ ಹಣ ಅಥವಾ ಆಸ್ತಿಯನ್ನು ದೋಚಲು ಹೊಂಚು ಹಾಕುತ್ತಿರುತ್ತಾರೆ.
Property buying advice
ಇದನ್ನೂ ಓದಿ: ರಾಜ್ಯಕ್ಕೆ ಈ ವರ್ಷ ವಾಡಿಕೆಗಿಂತ ಹೆಚ್ಚಿನ ಮಳೆ. Rain forecast 2024
ಇತ್ತೀಚೆಗೆ ಲ್ಯಾಂಡ್ ಮಾಫಿಯಾ ಮತ್ತು ಇನ್ನು ಅನೇಕ ಆಸ್ತಿ ಖರೀದಿ ಸಂಬಂಧಿತ ಕಷ್ಟಕಾರ್ಪಣ್ಯಗಳನ್ನು ಆಸ್ತಿ ಖರೀದಿಸುವವರು ಮತ್ತು ಮಾರುವವರು ಎದುರಿಸುತ್ತಿದ್ದು, ಈ ವೇಳೆ ಯಾವೆಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಮತ್ತು ಸರ್ಕಾರದ ರೂಲ್ಸ್ ಏನಿರುತ್ತದೆ ಎಂಬುದರ ಬಗ್ಗೆ ತಿಳಿಯೋಣ.
ಕೊಬ್ಬರಿ ಖರೀದಿ ಏಪ್ರಿಲ್ 1ರಿಂದ ಆರಂಭ. ಈ ರೈತರಿಗೆ 11,160₹ ಬೆಲೆ ನಿಗದಿ.
- ಮೊದಲಿಗೆ ನೀವು ಜಮೀನು ಮಾಲೀಕರ ಹೆಸರಿನಲ್ಲಿ ಇದೆಯಾ ಎಂಬುದನ್ನು ಅವರ ಆರ್ ಟಿ ಸಿ ಉತಾರ ಪಡೆದುಕೊಂಡು ಹತ್ತಿರದ ತಾಲೂಕು ಕಚೇರಿಗೆ ಭೇಟಿ ಮಾಡಿ ಪರಿಶೀಲನೆ ಮಾಡಿ.
- ಇಲ್ಲವೇ ನಿಮ್ಮ ಮೊಬೈಲ್ ಮುಖಾಂತರ bhoomi records ನಲ್ಲಿ, ಸರ್ವೆ ನಂಬರ್ ಇಸ್ಸ ಹಾಕುವುದರ ಮೂಲಕ ಮಾಲೀಕತ್ವವನ್ನು ಚೆಕ್ ಮಾಡಿಕೊಳ್ಳಬಹುದು.
- ಜಮೀನು ಮಾಲೀಕರಿಗೆ ಯಾವ ರೂಪದಲ್ಲಿ ಹಸ್ತಾಂತರವಾಗಿದೆ, ಸ್ವಂತ ಖರೀದಿ ಮಾಡಿದ್ದು, ಅಥವಾ ಪಿತ್ರಾರ್ಜಿತ ಆಸ್ತಿಯಾಗಿದೆಯಾ, ಮತ್ತು ದಾನದ ರೂಪದಲ್ಲಿ ಆಸ್ತಿ ಬಂದಿದೆಯಾ ಎಂಬುದನ್ನು ತಿಳಿದುಕೊಳ್ಳಿ.
- ಮುಖ್ಯವಾಗಿ ನೀವು ಕೊಂಡುಕೊಳ್ಳುವ ಜಮೀನಿನ ಮೇಲೆ ಯಾವುದಾದರೂ ಕೇಸ್ ಸಕ್ರಿಯದಲ್ಲಿದೆ ಎಂಬುದನ್ನು ತಿಳಿಯಿರಿ. ಯಾಕೆಂದರೆ ಒಂದು ವೇಳೆ ಜಮೀನಿನ ಮಾಲೀಕತ್ವದ ಮೇಲೆ ಸಂಬಂಧಿಕರು ಅಥವಾ ಬೇರೆಯವರು ಕೋರ್ಟಿನಲ್ಲಿ ದಾವೆಯನ್ನು ಹೂಡಿದ್ದರೆ ಅಂತಹ ಜಮೀನನ್ನು ಕೊಂಡುಕೊಳ್ಳಲು ಮತ್ತು ಮಾರಲು ಸಾಧ್ಯವಿಲ್ಲ.
- ಹಾಗೆಯೇ ಜಮೀನಿನ ಆರ್ ಟಿ ಸಿ ಉತಾರದಲ್ಲಿ ಅಥವಾ ಪಹಣಿ ಪತ್ರದಲ್ಲಿ ಬಲಗಡೆ ಭಾಗದಲ್ಲಿ ಋಣಗಳು ಎಂಬ ಕಾಣೆಯಲ್ಲಿ ಎಷ್ಟು ಸಾಲವಿದೆ ಮತ್ತು ಯಾವ ಬ್ಯಾಂಕಿನಲ್ಲಿ ಸಾಲ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
- ಋಣಗಳಲ್ಲಿ ಸಾಲ ವಿದ್ದರೆ ಮುಂದೆ ಖರೀದಿ ನಂತರ ಅದನ್ನು ಸಂಪೂರ್ಣ ನೀವೇ ಕಟ್ಟಬೇಕಾಗುತ್ತದೆ ಎಚ್ಚರವಿರಲಿ.
- ಹಾಗೆಯೇ ಜಮೀನಿನ ಅಕ್ಕ ಪಕ್ಕದಲ್ಲಿ ಇರುವ ಭೂಮಾಲೀಕರ ಹತ್ತಿರ ವಿಚಾರಿಸಿ ನೀರಾವರಿ ಮಾಡಲು ಅಂತರ್ಜಲವಿದೆ ಎಂಬುದನ್ನು ಪರಿಶೀಲಿಸಿ.
- ಹೀಗೆ ಇನ್ನೂ ಹಲವು ಮುಖ್ಯ ವಿಚಾರಗಳನ್ನು ಖಚಿತಪಡಿಸಿಕೊಂಡ ನಂತರವೇ ಆಸ್ತಿ ಖರೀದಿಯನ್ನು ಮಾಡಲು ಮುಂದುವರಿಯರಿ.
ಇಂತಹ ಬಹು ಮುಖ್ಯ ಮಾಹಿತಿಗಳನ್ನು ನಿಮ್ಮ ಮೊಬೈಲ್ಗೆ ವಾಟ್ಸಾಪ್ ಮೂಲಕ ಪ್ರತಿದಿನ ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿರಿ. ಧನ್ಯವಾದಗಳು.
ಇದನ್ನೂ ಓದಿ: ರಾಜ್ಯದಲ್ಲಿ ಈ ಜಿಲ್ಲೆಗಳಿಗೆ ಬಿಸಿ ಗಾಳಿ ಎಚ್ಚರ. Heat wave alert
Bara parihara hana : ಯಾರಿಗೆ ಬರ ಪರಿಹಾರ ಹಣ ಬಂದಿಲ್ಲ, ಈ ಕೆಲಸ ಮಾಡಿ ಹಣ ಬರುತ್ತೆ.