9ನೇ ತರಗತಿಯಿಂದ 12ನೇ ತರಗತಿ ಓದುತ್ತಿರುವವರಿಗೆ ಸಿಗಲಿದೆ 12 ಸಾವಿರ ವಿದ್ಯಾರ್ಥಿ ವೇತನ : ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಜಮವಾಗಲಿದೆ | Scholarship for 9th to 12th Students
9 ರಿಂದ 12ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕಾಗಿ ಹುಡುಕುತ್ತಿದ್ದರೆ ಇಲ್ಲಿದೆ ಸುವರ್ಣ ಅವಕಾಶ. ಅರ್ಜಿ ಸಲ್ಲಿಸಿದವರಿಗೆ ಸಿಗಲಿದೆ 12,000 ರೂಪಾಯಿ ವಿದ್ಯಾರ್ಥಿ ವೇತನ.
Scholarship for 9th to 12th Students
Bara parihara hana : ಯಾರಿಗೆ ಬರ ಪರಿಹಾರ ಹಣ ಬಂದಿಲ್ಲ, ಈ ಕೆಲಸ ಮಾಡಿ ಹಣ ಬರುತ್ತೆ.
ಯಾವುದು ಈ ವಿದ್ಯಾರ್ಥಿ ವೇತನ? ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಯಾರು ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿಯನ್ನು ಈ ಲೇಖನದಿಂದ ತಿಳಿದುಕೊಂಡು ಅರ್ಹ ವಿದ್ಯಾರ್ಥಿಗಳು ಬೇಗನೆ ಅರ್ಜಿ ಸಲ್ಲಿಸಿ..
ವಿದ್ಯಾರ್ಥಿ ವೇತನದ ವಿವರ :
ವಾಲ್ಟೊಲಿನ್ ಕಮ್ಮಿನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವತಿಯಿಂದ ” ಮುಸ್ಕಾನ್ ಸ್ಕಾಲರ್ಶಿಪ್” ಎಂಬ ಹೆಸರಿನಲ್ಲಿ ನೀಡುತ್ತಿರುವ ಈ ವಿದ್ಯಾರ್ಥಿ ವೇತನದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ವಾರ್ಷಿಕ 12,000 ರೂಪಾಯಿವರೆಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ.
Muskan Scholarship 2024 – ಮುಸ್ಕಾನ್ ಸ್ಕಾಲರ್ಶಿಪ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹತೆಗಳು :
• ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು 9ನೇ ತರಗತಿಯಿಂದ 12ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರಬೇಕು.
• ಕರ್ನಾಟಕ ರಾಜ್ಯ ಸೇರಿದಂತೆ ದಕ್ಷಿಣ, ಪೂರ್ವ ಮತ್ತು ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು.
• ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಆರ್ಥಿಕವಾಗಿ ದುರ್ಬಲ ವರ್ಗದವಾರಗಿರಬೇಕು ಅಥವಾ ವಾಣಿಜ್ಯ ಚಾಲಕರ ಮಕ್ಕಳಾಗಿರಬೇಕು.
ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಇನ್ನೂ ಬಂದಿಲ್ಲವೇ? ಈ ಕೆಲಸ ಮಾಡಿ Gruhalakshmi 11th Installment Updates
ಅದೇ ರೀತಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಪಾಸಾಗಿರಬೇಕು ಹಾಗೂ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ವರಮಾನವು 8 ಲಕ್ಷ ರೂಪಾಯಿ ಒಳಗಿರಬೇಕು.
ಮುಸ್ಕಾನ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಈ ದಾಖಲಾತಿಗಳು ಕಡ್ಡಾಯ :
• ವಿದ್ಯಾರ್ಥಿಯ ಹಾಗೂ ಪಾಲಕರ ಆಧಾರ್ ಕಾರ್ಡ್
• ಪ್ರಸ್ತುತ ಶೈಕ್ಷಣಿಕ ವರ್ಷದ ಪ್ರವೇಶ ಪ್ರಮಾಣ ಪತ್ರ
• ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್
• ಪೋಷಕರ ವಾಣಿಜ್ಯ ಚಾಲನ ಪರವಾನಗಿ ಪತ್ರ
• ಭಾವಚಿತ್ರ
• ವಾರ್ಷಿಕ ವರಮಾನ ಪ್ರಮಾಣ ಪತ್ರ
ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಪ್ರಾರಂಭವಾಗಿದ್ದು ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಸಪ್ಟೆಂಬರ್ 3, 2024 ನೇ ತಾರೀಖಿನ ಒಳಗಾಗಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಅರ್ಜಿ ಸಲ್ಲಿಸುವವರು ಕೆಳಗಿನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ : https://www.buddy4study.com/page/muskaan-scholarship-program
HAL ನಲ್ಲಿ ಹುದ್ದೆಗಳ ನೇಮಕಾತಿ, 45000₹ ಸಂಬಳ. ಇಲ್ಲಿದೆ ಮಾಹಿತಿ. hal recruitment
https://adrustavani.com/check-crop-loan-from-your-mobile/