ಇತ್ತೀಚಿನ ದಿನಗಳಲ್ಲಿ ಅತಿಯಾದ ಬೊಜ್ಜಿನ ಸಮಸ್ಯೆ ಪ್ರತಿಯೊಬ್ಬರನ್ನು ಸಹ ಕಾಡುತ್ತಿದೆ. ತೂಕ ಇಳಿಸಿಕೊಳ್ಳಲು ಎಲ್ಲರು ಹರಸಾಹಸ ಪಡುತ್ತಾರೆ. ಪ್ರತಿದಿನ ತಾವು ಊಟಮಾಡುವ ಪ್ರಮಾಣದಲ್ಲಿ ಅರ್ಧದಷ್ಟು ಕಮ್ಮಿ ಮಾಡಿದರೂ, ಕೆಲವರು ಉಪಸವಾಸವಿದ್ದರೂ ಬೊಜ್ಜು ಹಾಗೆಯೆ weight loss tips in kannada ಉಳಿದುಬಿಡುತ್ತದೆ. ಬದಲಿಗೆ ಇನ್ನಷ್ಟು ರೋಗಗಳು ಬಂದು ಸೇರಿಕೊಳ್ಳುತ್ತವೆ.
ಹಾಗಾದರೆ ಈ ತೂಕವನ್ನು ಇಳಿಸುವುದಾದರೂ ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.
ತೂಕವನ್ನು ತ್ವರಿತವಾಗಿ ಕಳೆದುಕೊಳ್ಳಲು ನಿಮ್ಮ ಆಹಾರಕ್ರಮವನ್ನು ಬದಲಿಸ ಬೇಕು. ಹೌದು ಕೆಲವು ಆರೋಗ್ಯ ಭರಿತ ತರಕಾರಿಗಳ ರಸವನ್ನು ಕುಡಿಯುವುದರಿಂದ ತೂಕವನ್ನು ಸುಲಭವಾಗಿ ಇಳಿಸಬಹುದು.
ಇದನ್ನೂ ಓದಿ; ಸೋಲಾರ್ ಪಂಪ್ಸೆಟ್ ಯೋಜನೆ ಕೇವಲ 20,000 ಕಟ್ಟಿದ್ರೆ ಸಾಕು. ಈಗಲೇ ಅರ್ಜಿ ಸಲ್ಲಿಸಿ. solar pumpset scheme
weight loss tips in kannada
ನೀವು ತೂಕ ಇಳಿಸಿಕೊಳ್ಳಲು ಎಲ್ಲಾ ಕ್ರಮಗಳನ್ನು ಪ್ರಯತ್ನಿಸಿ ಬೇಸತ್ತಿದ್ದರೆ ಹಾಗೆ ಯಾವುದೇ ಗಮನಾರ್ಹ ವ್ಯತ್ಯಾಸವನ್ನು ಕಾಣದಿದ್ದರೆ, ನಾವು ನೀಡಿರುವ ಕೆಲವು ಕ್ರಮಗಳನ್ನು ಪ್ರಯತ್ನಿಸಿ ನಿಮ್ಮ ತೂಕವನ್ನು ಇಳಿಸಿ.
ಹಣ್ಣು ಮತ್ತು ತರಕಾರಿ ರಸಗಳು ತೂಕ ನಷ್ಟಕ್ಕೆ ಬಹಳ ಸಹಾಯಕವಾಗಿವೆ ಎಂಬುವುದು ನಿಮಗೆ ತಿಳಿದಿದೆಯೇ? ನಿಮ್ಮ ದಿನನಿತ್ಯದ ಆಹಾರದಲ್ಲಿ ಇವುಗಳನ್ನು ಸೇರಿಸುವುದರಿಂದ, ನೀವು ಒಂದು ವಾರದಲ್ಲಿ ಸ್ವಲ್ಪ ಮಟ್ಟಿಗೆ ತೂಕ ಕಳೆದುಕೊಳ್ಳಬಹುದು.
ಹೆಚ್ಚಿನ ಜನರು ತೂಕ ಇಳಿಸಿಕೊಳ್ಳಲು ಆಹಾರ ಪದ್ಧತಿಯನ್ನು ಅನುಸರಿಸುತ್ತಾರೆ, ಆದರೆ ಹಸಿವಿನಿಂದ ಬಳಲುವುದು ತೂಕ ಇಳಿಸಿಕೊಳ್ಳಲು ಸರಿಯಾದ ಮಾರ್ಗವಲ್ಲ ಎಂಬುವುದು ನಿಮಗೆ ತಿಳಿದಿರಲಿ.
ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಒಂದು ಉತ್ತಮ ವಿಧಾನವೆಂದರೆ ಹಣ್ಣು ಮತ್ತು ತರಕಾರಿ ರಸವನ್ನು ಕುಡಿಯುವುದು, ಆದ್ದರಿಂದ ಈ ಲೇಖನದಲ್ಲಿ ಯಾವ ತರಕಾರಿ ರಸಗಳು ಪರಿಣಾಮಕಾರಿ ಎಂದು ತಿಳಿಯೋಣ.
ಸೋರೆಕಾಯಿ ರಸ:
ಸೋರೆಕಾಯಿ ರಸದಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಜೊತೆಗೆ, ಇತರ ಅನೇಕ ಅಗತ್ಯ ಖನಿಜಗಳು ಕಂಡುಬರುತ್ತವೆ. ಇದು ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಹೊಟ್ಟೆಯ ಸಮಸ್ಯೆಗಳನ್ನು ಪರಿಹರಿಸುತ್ತದೆ. ಇದಲ್ಲದೆ, ಬಾಟಲ್ ಸೋರೆಕಾಯಿ ಜ್ಯೂಸ್ ಫೈಬರ್, ಪ್ರೊಟೀನ್ ಮತ್ತು ಪೊಟ್ಯಾಸಿಯಮ್ನಲ್ಲಿ ಸಮೃದ್ಧವಾಗಿರುವುದರಿಂದ ಇದು ದೇಹದಲ್ಲಿರುವ ಕೊಬ್ಬನ್ನು ಕಡಿಮೆ ಮಾಡುತ್ತದೆ. ಸೋರೆಕಾಯಿ ರಸವನ್ನು ಕುಡಿಯುವುದರಿಂದ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುತ್ತದೆ ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಪಾಲಕ್ ರಸ ( palak juice )
ಪಾಲಕ್ ಹಲವಾರು ರೀತಿಯ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಅತ್ಯಂತ ಪ್ರಯೋಜನಕಾರಿ ಸೊಪ್ಪು ತರಕಾರಿಯಾಗಿದೆ, ಇದನ್ನು ತಿನ್ನುವುದರಿಂದ ಅಥವಾ ಅದರ ರಸವನ್ನು ಕುಡಿಯುವುದರಿಂದ ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುತ್ತದೆ. ಪಾಲಕ್ ಸೊಪ್ಪಿನಲ್ಲಿ ವಿಟಮಿನ್, ಮಿನರಲ್ಸ್, ಪ್ರೊಟೀನ್ ಮತ್ತು ಫೈಬರ್ ಇರುತ್ತದೆ. ಪಾಲಕ್ ರಸವು ಕ್ಯಾಲೋರಿಗಳಲ್ಲಿ ತುಂಬಾ ಕಡಿಮೆಯಾಗಿದೆ, ಆದ್ದರಿಂದ ಇದನ್ನು ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ನಿಮ್ಮ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ
ಕೋಳಿ ಸಾಕಾಣಿಕೆ ಮಾಡುವ ವಿಧಾನ. ಮತ್ತು ಅಳತೆ, ವೆಚ್ಚ , ಇಲ್ಲಿದೆ ಮಾಹಿತಿ. Poultry farming in kannada
ಸೌತೆಕಾಯಿ ರಸ: ( cucumber juice )
ಬೇಸಿಗೆಯಲ್ಲಿ ಸೌತೆಕಾಯಿ ತಿನ್ನುವುದರಿಂದ ನಮ್ಮ ಹೊಟ್ಟೆ ಮತ್ತು ದೇಹ ಎರಡೂ ತಂಪಾಗಿರುತ್ತದೆ. ಸೌತೆಕಾಯಿ ರಸವು ಅನೇಕ ಪೋಷಕಾಂಶಗಳನ್ನು ಒಳಗೊಂಡಿರುವುದರಿಂದ ಇದರ ಜ್ಯೂಸ್ ಕುಡಿಯಿರಿ. ಇದರಿಂದ ನಿಮ್ಮ ದೇಹವು ತೇವಾಂಶದಿಂದ ಕೂಡಿರುತ್ತದೆ, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ ಮತ್ತು ತೂಕವೂ ನಿಯಂತ್ರಣದಲ್ಲಿರುತ್ತದೆ. ಅಷ್ಟೇ ಅಲ್ಲ ಸೌತೆಕಾಯಿ ಜ್ಯೂಸ್ ಕುಡಿಯುವುದರಿಂದ ನಿಮ್ಮ ತ್ವಚೆಗೆ ಹೊಳಪು ಬರುತ್ತದೆ.
ಕ್ಯಾರೆಟ್ ರಸ, carrot juice:
ಬಹುತೇಕ ಪ್ರತಿ ಋತುವಿನಲ್ಲಿ ಲಭ್ಯವಿರುವ ತರಕಾರಿ ಎಂದರೆ ಕ್ಯಾರೆಟ್. ಹೌದು ಇದು ಫೈಬರ್, ವಿಟಮಿನ್ಗಳು ಮತ್ತು ಇತರ ಅನೇಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿ ಎಲ್ಲ ಋತುವಿನಲ್ಲಿ ಸಹ ಲಭ್ಯವಿರುತ್ತದೆ.
ಇದು ದೇಹದಲ್ಲಿನ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವುದರಿಂದ ಮಧುಮೇಹದಂತಹ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ, ತ್ವಚೆಗೆ ಹೊಳಪು ಬರುತ್ತದೆ, ಕೂದಲು ಉದ್ದವಾಗಿ ಬೆಳೆಯುತ್ತದೆ ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ.
ಕೋಳಿ ಸಾಕಾಣಿಕೆ ಮಾಡುವ ವಿಧಾನ. ಮತ್ತು ಅಳತೆ, ವೆಚ್ಚ , ಇಲ್ಲಿದೆ ಮಾಹಿತಿ. Poultry farming in kannada